ಪೂಜಾ ಗಾಂಧಿ ಪ್ರಮುಖವಾಗಿ ಕನ್ನಡ, ತಮಿಳು ಚಿತ್ರರಂಗದ ನಟಿ. ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ. ಇವರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಸೀಸನ್ ಮೂರರ ಬಿಗ್‍ಬಾಸ್‍ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. == ಚಿತ್ರಗಳು == == ಉಲ್ಲೇಖಗಳು ==